ಮಾಸಲಾರದ ಗುರುತು,
ಮರೆಯಲಾರದ ನೆನಪು
ಅಕ್ಷರದಿ ಅಚ್ಚಾಗಿ ತುಂಬಿದೆ ಬಿಳಿಹಾಳೆ,
ಮೂಡಿಸಿ ನಿನ್ನ ಗುರುತು...
ಪುಟ ತಿರುವಿ ನೋಡಿದರೆ
ಕಣ್ಣ ತುದಿ ಒದ್ದೊದ್ದೆ
ಬರೀ ನೀರ ಬಿಂದು,
ತೊರೆದಾಗ ನೀ ಅಂದು
ಉಳಿಸಿದ್ದು ಅದನೊಂದು...
ಸ್ಫುಟವಾಗಿ ಗೋಚರಿಸಿ ಮರೆಯಾದ ನಕ್ಷತ್ರ
ಛೇ!ನೀನೊಂದು ಧೂಮಕೇತು.
ಎದುರಿಗೆ ಹೊಳಹು ಬಾಲದಿ ಬರಿ ಅಶ್ರು...
ಹೇಳು ನೀ ಅದಾವ ಕ್ಷುದ್ರ ಶತ್ರು ?
ಮಳೆಯಾಗಿ ಬಂದಿದ್ದೆ ನೆರೆಯಾಗಿ ಹರಿದಿದ್ದೆ,
ಕೊಚ್ಚಿ ಮನದ ಸವಿಸತ್ವ...
ಉಳಿಯದೇ ನನ್ನಲ್ಲಿ
ಉಗಿಯಾಗಿ ಹೋಗಿದ್ದೆ,
ಮರೆಮಾಚಿ ನನ್ನ ಅಸ್ಥಿತ್ವ...!!
©sathwik
ಮರೆಯಲಾರದ ನೆನಪು
ಅಕ್ಷರದಿ ಅಚ್ಚಾಗಿ ತುಂಬಿದೆ ಬಿಳಿಹಾಳೆ,
ಮೂಡಿಸಿ ನಿನ್ನ ಗುರುತು...
ಪುಟ ತಿರುವಿ ನೋಡಿದರೆ
ಕಣ್ಣ ತುದಿ ಒದ್ದೊದ್ದೆ
ಬರೀ ನೀರ ಬಿಂದು,
ತೊರೆದಾಗ ನೀ ಅಂದು
ಉಳಿಸಿದ್ದು ಅದನೊಂದು...
ಸ್ಫುಟವಾಗಿ ಗೋಚರಿಸಿ ಮರೆಯಾದ ನಕ್ಷತ್ರ
ಛೇ!ನೀನೊಂದು ಧೂಮಕೇತು.
ಎದುರಿಗೆ ಹೊಳಹು ಬಾಲದಿ ಬರಿ ಅಶ್ರು...
ಹೇಳು ನೀ ಅದಾವ ಕ್ಷುದ್ರ ಶತ್ರು ?
ಮಳೆಯಾಗಿ ಬಂದಿದ್ದೆ ನೆರೆಯಾಗಿ ಹರಿದಿದ್ದೆ,
ಕೊಚ್ಚಿ ಮನದ ಸವಿಸತ್ವ...
ಉಳಿಯದೇ ನನ್ನಲ್ಲಿ
ಉಗಿಯಾಗಿ ಹೋಗಿದ್ದೆ,
ಮರೆಮಾಚಿ ನನ್ನ ಅಸ್ಥಿತ್ವ...!!
©sathwik